Monday, October 30, 2006

ತೋಚಿದ್ದು ಗೀಚೋಕ್ಕಿಂತ , ಅನ್ನಿಸಿದ್ದು ಅನ್ನೋಕ್ಕಿಂತ , ಆಲಿಸೋದೆ ಆಹ್ಲಾದ ...ಏನಂತಿರಾ?

ಮಾತು ಮೌನದ ನಡುವೆ ಏನಿದೆ ? ಅಂತೀರಾ...
ಪ್ಚ್...... ನನ್ಗೂ ಗೊತಿಲ್ಲ ನಿಮಗೇನಾದರು ಗೊತ್ತ?
ಮಾತು , ಮೌನ ಎರೆಡು ಬಿಟ್ಟು ಮೂರನೆಯ ಸ್ಥಿತಿ ಯಾವುದಾದರು ಇದ್ಯ?
ನಿದ್ರಾವಸ್ತೆ ,ಸುಪ್ತಾವಸ್ತೆ ಅದೆಲ್ಲ ಬಿಟ್ಬಿಡಿ, ಎಚ್ಚರವಿದ್ದಾಗ ಮೂರನೆಯ ಸ್ತಿತಿ,
ಮಾತು ಅಲ್ಲದ , ಮೌನವಾಗಿಯೂ ಇರದ . ಮೂರನೆಯ ಸ್ಥಿತಿ !!

ಹ್ಮ್!!.... ಅದು "ಮೌನ ಮಾತನಾಡಿದಾಗ" ಅನ್ಕೊಳ್ಳೋಣ.!! ಹೇಗೆ ಅಂತೀರ?...

...ನೀವು ಸುಮ್ಮನೆ ಕುಳಿತು ಯೊಚನೆ ಮಾಡುವಾಗ!!ನಿಮ್ಮ ಮನಸ್ಸು ಮಾತಾಡಲ್ವ?
ಒಂದು ಬೆಚ್ಚನೆಯ ಗುಂಗಲ್ಲಿ , ಮನಸ್ಸು ಮೌನವಾಗಿ ಮಾತಾಡುವಾಗ , ಆಸಕ್ತಿಯಿಂದ ಕಣ್ಣು ಕಿವಿಗಳು ಅದರ ಮಾತನ್ನು ಆಸ್ವಾದಿಸುವಾಗಲೆ , ಸದ್ದಿಲ್ಲದೆ ಒಮ್ಮೊಮ್ಮೆ ಕೈಗಳು ಮನದ ಮಾತನ್ನು ಪುಟಗಳಿಗೆ ಇಳಿಸಿಬಿಡುತ್ತವೆ ಅಲ್ವಾ.

ಸದ್ದು ಮಾಡದೆ ಮೌನವಾಗಿ ಮಾತನಾಡುವ ನಿಮ್ಮ ಮನಸನ್ನ ಆಲಿಸಿದ್ದೀರ ?....ಆಲಿಸಿಯೇ ಇರುತ್ತೀರಿ,.ಏಕೆಂದರೆ ಒಬ್ಬ ಮೂಗನ ಮನಸ್ಸು ಕೂಡ ಮಾತಾಡತ್ತೆ. ಕಿವುಡನ ಮನಸ್ಸು ಆಲಿಸುತ್ತೆ , ಕುರುಡನ ಮನಸ್ಸೂ ಕೂಡ ನೋಡತ್ತೆ.

ಸರಿ ಹಾಗಾದರೆ ಈಗ ಹೇಳಿ!! , ಮೌನವಾಗಿ ಮಾತಾಡುವ ನಿಮ್ಮ ಮನಸ್ಸು,, ಮಾತಾಡುತ್ತೋ ಅಥವ ಮೌನವಾಗಿರತ್ತೋ.???