Monday, December 11, 2006

After kannada rajyothsava

November , the month of kannada rajyothsav ........
the zeel ok kannada should not end......when the november ends..


ಕನ್ನಡಿಗನಿಗೊಂದು ಪತ್ರ

- ಇಂದ : ಕನ್ನಡಮಾತೆ.


ಮಲಗಿದ್ದೆ ಮೂಲೆಯಲಿ , ಸತ್ತ ಉಸಿರಿನಲ್ಲಿ
ಮಾಸಿದ ಭೂಪಟದ ಧೂಳ ಮದ್ಯದಲಿ
ಮತ್ತೆ ಕರೆದೆಯ ಮಗನೆ ಉತ್ಸವದ ನೆಪದಲಿ
ಆದೇನು ಪ್ರೀತಿ ತೋರುವೆ ಒಂದು ತಿಂಗಳಿನಲ್ಲಿ

ಇತಿಹಾಸ ಪುಟಗಳಲಿ , ಕವಿಯ ಪದಗಳಲಿ
ಹರಿವ ನೀರಿನಲಿ , ವೀರ ನೆತ್ತರಿನಲಿ
ಕರಗಿ ಹೊದೆನು ಅಂದು,ಮತ್ತೇಕೆ ಕರೆದೆ ಸೋಗಿನಲಿ ಇಂದು
ಏನಾದರು ಸರಿ ,ತಾಯಿ ಬರುವಳು ಮಕ್ಕಳ ಕೂಗಿಗೆಂದೆಂದು.

ಬಯಸಲಾರೆನು ನಾನು ಹೂವ ಮಾಲೆಯನು ,,
ವಿಜ್ರುಂಭಣೆಯ ಜೋರು ಉತ್ಸವವನು
.....ಬಯಸುವೆ ನಿನ್ನನು-
ಕನ್ನಡದ ಸೂನಾಗಿ
ಚೆನ್ನುಡಿಯ ಕುಲವಾಗಿ
ಹೊನ್ನುಡಿಯ ಭರವಸೆಯ ಜ್ಯೋತಿಯಾಗಿ
ಪರಿಶ್ರಮದ ಶಿಸ್ಥಿನ ಕಂದನಾಗಿ


ಋತುಗಳೆ ಉರುಳಿದರು , ವರ್ಷಗಳೆ ಕಳೆದರೂ
ಕಾಣೆನು ನಿನ್ನಲ್ಲಿ ಎನ್ನ ವಿಶ್ವೇಶ್ವರಯ್ಯನನು
ನಭಕೆ ಹಾರುವ ದಿಟ್ಟ ವಿಜ಼್ನ್ಯಾನಿಯನು
ಬಡವರ ಕಣ್ಣೊರೆಸುವ ಧೀರ ನಾಯಕನನು
ಇನ್ನಾದರೂ ಉಳಿಸು ಈ ಭರವಸೆಯ ಮಾತನು


ಓ ನನ್ನ ಕನ್ನಡಿಗ -

ನಿಚ್ಚ ನಡೆ ನುಡಿಯಿರಲಿ
ಆಚ್ಚ ಕನ್ನಡದಲ್ಲಿ
ಸ್ವಚ್ಚವಾಗಿರಲಿ ಬದುಕು ಸಚ್ಚರಿತದಲಿ
ಸ್ವಚ್ಛಂದವಾಗಿರಲಿ ಮನ ಹೊಚ್ಚ ಹೊಸದಿರಲಿ

ಸಹ್ಯಾದ್ರಿ ಸೊಂಪಿನ , ಕಾವೇರಿ ಮಡಿಲಿನ
ವಿಶ್ವ ಮಾನವನ ಕನಸು
ಹಿಂಸೆ ರಕ್ತಾಸುರನ ಕೊನೆಯ ಕನಸು
ನಾಡ ನವೋದಯದ ನವುರಾದ ಕನಸನು
ಕನ್ನಡದ ಕಂದನು ನನಸಾಗಿಸಲಿ

1 comment:

Anonymous said...
This comment has been removed by a blog administrator.