Wednesday, April 25, 2007

ನಿಮ್ಮಾಣೆಗೂ , ಪ್ರಾಣಾಬೇಕಾದ್ರೂ ಕೊಡ್ತಾರೆ! ಅದು ಬರೀ ಒನ್ ಡೇ ಮ್ಯಾಚ್ ಅಲ್ಲಾ!! "ಯುದ್ಧ" !



2nd PUC ಎಕ್ಸಾಮ್ ಅಲ್ಲೊ , ನಿನ್ಗೇನಾದ್ರೂ ಭಯ ಇದ್ಯ ನನ್ಮಗನೆ !!! ಕ್ರಿಕೆಟ್ ನೊಡ್ತಾ ಕೂತಿದ್ಯಲ್ಲ.
ಏಯ್ ಸುಮ್ನಿರಮ್ಮ ಅಲ್ಲಿ , ,ನಾನೆಲ್ಲ ಓದಿ ಮುಗ್ಸಿದ್ದೀನಿ ಆಯ್ತ, ಇಂಡಿಯ ಸುಪರ್ 8 ಗೆ ಹೋಗತ್ತೊ, ಇಲ್ವೊ ಅಂತ ,ನನಿಗೆ ಭಯ ಆಗ್ತಿದೆ ಅಲ್ಲಿ!!ಅಂತ ಈ ಹುಡ್ಗ ಅವರಮ್ಮನ ಮೆಲೆ ಸಿಡುಕೋದೆ.
ಏಯ್ ನಿನ್ಗೆನಾದ್ರು ಭಯ ಇದ್ಯ !! ಥು ಈ ಮನೆಹಾಳ್ ಕ್ರಿಕೆಟ್ ವರ್ಡ್ ಕಪ್ಪೋ!ಈ ವರ್ಷನೇ ಬರ್ಬೇಕಾ .ನೊಡು ಎದ್ ಹೋಗಿ ಓದ್ಕೊ..
ಎಷ್ಟು ಆತಂಕ ಇತ್ತು ಅಲ್ವ ! ಒನ್ ಡೆ ವರ್ಲ್ದ್ ಕಪ್ಪು ಇಂಡಿಯ ಮ್ಯಾಚು ನೊಡ್ವಾಗ.ನಿಜ ಆ ಹುಡ್ಗನಿಗು ಎಸ್ಟ್ ದೇಶ ಭಕ್ತಿ , ಎಸ್ಟ್ ಟೆನ್ಶನ್ ... ಅಲ್ಲ ನಾವು ನೀವು ಎಲ್ಲ ಇದೇ ದೇಶ ಭಕ್ತಿಯಿಂದನೇ ನೋಡ್ಲಿಲ್ವ ಹೇಳಿ..ನಾವೇನ್ ಕಡಿಮೆನೇ.
ನಮ್ಮವ್ರು ಸೊತಿದ್ ಬೇರೆ ವಿಷ್ಯ !! ಅದೆಲ್ಲ "secondary" ಈಗ್ಯಾಕೆ!!?...
ದೇಶಕ್ಕಾಗಿ ಕ್ರಿಕೆಟ್ ಆಡ್ತಾರೆ , ನಮ್ ದೇಶಕ್ಕೆ ಕಿರೀಟ ಇದ್ದಂಗೆ ಅವರು , ನೆಕ್ಸ್ಟ್ ಟೈಂ ಗೆದ್ದೇ ಗೆಲ್ತಾರೆ ಕಣ್ರೀ ಅವರು , ಬೇಕಾದ್ರೆ ನೋಡ್ತಿರಿ . ನಿಜ್ವಾಗ್ಲೂ 100 ಕೋಟಿ ಭಾರತೀಯರ ಮಿಡಿತ ಅವ್ರಿಗೇನ್ ಅರ್ಥ ಆಗ್ಧೇ ಇರತ್ಯೆ.

ಎಸ್ಟೆ ಆಗ್ಲೀ ನಮ್ಮವ್ರು - ನಮವರನ್ನ ಸೋತ್ರು ಅಂತ ದೂರ ತಳ್ಳೊಕ್ಕಾಗತ್ತಾ !! ರೂಮ್ ಗೋಡೆ ಮೇಲೆ ವರ್ಶಾನ್ ಗಟ್ಲೆಯಿಂದ ಅವ್ರ ಫೊಟೋ ಅಂಟಿಸಿ ಪೂಜೆ ಮಾಡ್ತೀವಲ್ಲ - ಆವೆಲ್ಲ ಕಿತ್ ಹಾಕಕ್ಕಾಗತ್ತ?..."ಜೀವನದಲ್ಲಿ ಸೋಲು ಗೆಲುವು ಇದ್ದಿದ್ದೇ " , ಯಾರ್ ಸೊಲಲ್ಲ ಹೇಳಿ.
ಆದ್ರೆ ಜ್ಣಾಪ್ಕ ಇದ್ಯ ಇದೇ ಎಪ್ರಿಲ್ - ಮೇ ,ಜೂನ್ ತಿಂಗಳ ಆಸುಪಾಸು ೧೯೯೯- ಅವತ್ತು ನಾವು " ಭಾರತೀಯರು ಸೋತಿದ್ರೆ"..ಏನಾಗ್ತಿತ್ತು??- ನಾವ್ ಸೊಲಿಲ್ಲ ಬಿಡಿ.ಎನ್ತ ಹೀರೋಗಳು ಗೊತ್ತ ಕಣಕ್ಕಿಳ್ದಿದ್ದು ,ಹೆಗ್ ಸೊತ್ಬಿಡ್ತೀವಿ?ಹಾ!!
ಏನಪ್ಪ ಇದು ಯಾವಾಗ ,ಯಾವ್ ಮ್ಯಾಚು ,ಯಾವ್ ವಿಷಯ ಅಂತೀರ.ಸ್ವಲ್ಪ ತಡೀರಿ ಹೇಳ್ತೀನಿ.

ಹೇಯ್ ಇವತ್ತು ಐಶ್ವರ್ಯ ಅಭಿಷೇಕ್ ಮದ್ವೆ !!! ವಹ್!! ಹೇಯ್ ಬಟ್ ವಿವೇಕ್ ಅದೆ ಕಣೋ ವಿವೇಕ್ ಓಬೆರಾಯ್ ಇಲ್ಲಿ ವಿಶ್ವ ಗೋ ಸಮ್ಮೇಳನದಲ್ಲಿ ಇದ್ದರಂತೆ !ಅಮಿತಾಭ್ ಮನೆ ಮುಂದೆ full ಜನ ಅಂತೆ ಕಣಮ್ಮ !!
Actually ಐಶ್ವರ್ಯ ಮಿಸ್ ವರ್ಲ್ಡ್ ಆದಾಗ್ಲಿಂದನೂ " ನನ್ favourite " ಗೊತ್ತ ಅವ್ಳು ನಮ್ ದೇಶದ ಹೆಮ್ಮೆ ಅನ್ನಿಸ್ತಿತ್ತು - ಇವತ್ತು ಅವಳ ಮದ್ವೆ ಕಣೆ ಥ್ರಿಲ್ಲಿಂಗ್ ಅಲ್ವ?...ಆಮೇಲೆ ಅವ್ಳು ಮತ್ತೆ ಆಕ್ಟ್ ಮಾಡ್ತಳೋ ಇಲ್ವೋ ಯೋಚ್ನೇ ಆಗ್ಬಿಟ್ಟಿದೆ ನನ್ಗೆ.

ಹೇಯ್ "ದುನಿಯಾ" ನೋಡಿ "ಅಖಿಲ ಕರ್ನಾಟಕ ಕರಿಯರ ಸಂಘ ಸ್ಟಾರ್ಟ್ ಆಗಿದ್ಯಂತೆ ಕಣಮ್ಮ !!ಈಗೆಲ್ಲ ಡಿಮ್ಯಾಂಡು ಬಿಡೋ ಲೊ !! ನಿಜ್ವಾಗ್ಲೂ ಕಣಮ್ಮ ಆ film ಇಂದ ಒಳ್ಳೆಯದೆ ಆಯ್ತು ... ಅಲ್ಲ ಕರ್ಗಿದ್ರೆ ಒಬ್ಳೂನೂ ಕಣ್ಣೆತ್ತಿ ನೊಡಲ್ಲ ಅನ್ತಿದ್ಲು.ಎಸ್ಟು ಅವಮಾನನಮ್ಮ ಇವತ್ತು ಆ ಅವಮಾನ ಎಲ್ಲ ಆ film ಇಂದ ಹೋಯ್ತು ಕಣಮ್ಮ - ಇನ್ಮೇಲೆ ಅವ್ನೇ ನಮ್ ದೆವ್ರು ಕಣಮ್ಮ ಲೆ.


ಕಷ್ಟ ಪಟ್ರೆ ಜನ ಮೆಚ್ಚೇ ಮೆಚ್ಚ್ತಾರೆ ಅಂತ ತೋರಿಸಿದ್ದಾರೆ ನಮ್ stars ಗಳು,- ಅದ್ ಸತ್ಯ ಬಿಡಿ. ಎಸ್ಟ್ ಜನ ಹೀರೊಗಳು , ಶಿಲ್ಪ ಶೆಟ್ಟಿ ಅಂತ ನಮ್ ದೇಶದ ಹೆಸರು ಎತ್ತಿ ಹಿಡಿದ ಹಿರೊಇನ್ ಗಳ ಬಗ್ಗೆ ಹೆಮ್ಮೆ ಪಟ್ಕೊಳ್ಳಲೇ ಬೇಕು ನಮ್ಮವರು , ಬಿಟ್ಕೊಡಕ್ಕಾಗತ್ತ ?.. ನಾವ್ ಇಂಡಿಯನ್ಸ್ ಆಗಿ. ಯೋಚನೆ ಮಾಡಿ, ಕಲಾ ಸೇವೆ ಜನ ಸೇವೆ ಅಂದ್ರೆ , ನಾವು ನೀವು ಕೂತ್ಕೊಂಡ್ ಮಾತಾಡ್ದಂಗಲ್ಲ .ಆವರೆಲ್ಲ ಜನ ಮನ ಗೆದ್ದಿದ್ದಾರೆ.

ಹಾಗೆ ಸ್ವಲ್ಪ ನೆನಪು ಮಾಡ್ಕೊಳ್ಳಿ ಜನ ಮನ ಗೆಲ್ಲೋದಷ್ಟೆ ಅಲ್ಲ ನಮ್ಮ ದೇಶದ ಜೀವನಾಡಿ ಗೆದ್ದರಲ್ಲ!!ಆವತ್ತು ಸೋತಿದ್ರೆ ಇವತ್ತು ನಮ್ಮ ಮರಿಯಾದೆ ನಾವು ಬೆಳ್ಳಗೆ ಹೊಳೀತಿದ್ರೂ ಇರ್ತಿರಲಿಲ್ಲ ಬಿಡಿ.
ಸ್ವಲ್ಪ ತಡೀರಿ ಅಂತ ಹೇಳಿದ್ದೆ...ಯಾವ್ ಮ್ಯಾಚ್ ಗೊತ್ತ - ಅದೆ 1999 ಅಲ್ಲಿ ಆದದ್ದು ಜ್ನ್ಯಾಪ್ಕ ಬರ್ಲಿಲ್ವ..
" Indo - pak " match …. …" ಕರ್ಗಿಲ್ ಕದನ".. i mean kargil war – 1999
ಇದೆ ಮೇ - ಜೂನ್ ನಲ್ಲಿಯೇ ನೆಡೀತು ಅಲ್ವ.
ಫ್ಲೀಸ್ ನಮ್ಮೆಲ್ಲ ಥರದ ದೇಶ ಭಕ್ತಿಯ ನಡುವೆ ಸ್ವಲ್ಪ , ಸ್ವಲ್ಪ ಜ್ನ್ಯಾಪಿಸ್ಕೊಳ್ಳೊಣ್ವ.
ಪ್ರತಿ ದಿನ ಹೀರೊ ,ದೇವ್ರು ,favourite ಅಂತ ಪೂಜೆ ಮಾಡೋದ್ರ ನಡುವೆ ಸ್ವಲ್ಪ ಹೊತ್ತಾದ್ರೂ ಇವ್ರನ್ನ ನೆನ್ಸ್ಕೊಳ್ಳೋಣ.
ಸೋತ್ರು ಪರ್ವಾಗಿಲ್ಲ "ಸೋಲು ಗೆಲ್ವು ಇದ್ದಿದ್ದೆ ನಮ್ ಜೀವನದಲ್ಲಿ "ಅನ್ತ ನಮ್ಮವರನ್ನ ಎಷ್ಟು ಪ್ರೀತಿಸ್ತೀವಿ ನಾವು ,ಎಷ್ಟು ಉದಾರಿಗಳು ನಾವು - ಸೋತವರಲ್ಲ ಇವ್ರು ,ಗೆಲ್ಲೋಕ್ಕೆ ಸತ್ತವ್ರು ,ಅನ್ಥವರನ್ನ ಒಂದೇ ಒಂದು ನಿಮಿಷ ಜ್ನ್ಯಾಪಿಸಿಕೊಳ್ಳೊಣ.
ತುಂಡು ತುಂಡು ಬಟ್ಟೆ ಆದ್ರೂ ಪರ್ವಾಗಿಲ್ಲ ಅಂತ ಅದರಲ್ಲೇ ಭಾರತೀಯತೆ ಕಂಡು ,ಭಾವುಕತೆಯಲ್ಲಿ ಭೇಷ್ ಅಂದವರು ನಾವು.
ಕ್ಷಣ ಕ್ಷಣವು ಹೊಂಚು ಹಾಕುವವರ ಮುಂದೆ ,ಮಾನ ,ಭಾರತದ ಘನತೆ ಎತ್ತಿ ಹಿಡಿದವರನ್ನ ಸ್ವಲ್ಪ ಜ್ನ್ಯಾಪಿಸಿ ಕೊಳ್ಳೊಣ್ವ?.......ಇನ್ಯಾಕೂ ಇಲ್ಲಪ್ಪ ಮನೆಗೆ ಜಯಶಲಿಯಾಗಿ ಬರ್ತೀನಿ ಆಶೀರ್ವಾದ ಮಾಡಮ್ಮ ಅಂತ ಹೋದ ಮಗ - " Great hero" ಆಗಿ ವಾಪಸ್ ಬಂದ ಮಗ ಪಾಪ ಸುಸ್ತ್ ಆಗಿ ಶವ ಪೆಟ್ಟೆಗೇಲಿ ಮಲಗಿದ್ರೆ ಯಾವ್ ತಾಯಿಗೆ ಕರುಳು ಕಿವುಚಲ್ಲ ಹೇಳಿ.

ಹಿಮಾಲಯದ ಸಾಲು ಪರ್ವತಗಳು , ನಮ್ಮ ಹೆಮ್ಮೆಯ , ಭಾರತ ಮಾತೆಯ ಕೊರಳಿಗೆ ಹಾರ.
ಕೊರೆಯುವ ಚಳಿ , ಕಣ್ಣಾಯ್ಸಿದಷ್ಟು ದೂರ ಹಿಮ , ಬೀಳುವ ಮಂಜು , ಇದೆಲ್ಲ ಆತನ ಕಣ್ಣಿಗೆ ಕಾಣಿಸೋಲ್ಲ.
ಆವನಿಗೆ ಕಾಣಿಸೋದು ಒಂದೆ -ರಜತ ಗಿರಿಯ ತುತ್ತ ತುದಿ , ಎಷ್ಟೊತ್ತಿಗೆ ಅಲ್ಲಿ ವಿಜಯ ಪಾತಾಕೆ ಹಾರಿಸ್ತಿನೋ ಎಂದು ಹಪತಪಿಸುವ ಮನಸ್ಸು.ಒಬ್ಬ ಯೋಧ ಅವನು , " ಮಾಡು ಇಲ್ಲವೆ ಮಡಿ" ಇದನ್ನ ಬಿಟ್ಟು ಏನೂ ಸದ್ಯಕ್ಕೆ ಗೊತ್ತಿಲ್ಲದವನು, ಯಾರಿಗಾಗಿ ಮಡಿಯೋದು? ಭಾರತಕ್ಕೆ ,ಭಾರತ ಮಾತೆಗೆ,ಭಾರತದ ಮಣ್ಣಿಗೆ., ಯಾವ ಭಾರತ?..ಗೆದ್ದರೆ ಕೂಗಿ ಕೇಕೆ ಹಾಕಿ ನಲೀತಿವಲ್ಲ 100 ಕೋಟಿ ಜನ ಅದು ಭಾರತ , ಶತ್ರುಗಳ ಕೈಯಲ್ಲಿ ಗುಲಾಮರಾಗದೆ ಬೆಚ್ಚನೆಯ ಮನೆಯಲ್ಲಿ ಕುಳಿತಿದ್ದೀವಲ್ಲಾ ಅದು ಭಾರತ.


ಆ ಯೋಧನನ್ನ ನೆನಪು ಮಡ್ಕೊಳ್ಳೋಣ , ಪಾಪ ಆತ ಗೆದ್ದು ಬಂದರೂ ಅವ್ನಿಗೆ ಯಾವ ಚೆಕ್ , ಕ್ಯಾಶ್ ಸಪರೆಟೆ ಆಗಿ ಯಾರು ಕೊಡಲ್ಲ . ರಿಯಲ್ ಹೀರೊ ಆಗಿದ್ರೂ ಯಾವ್ ಉದ್ಯಮ(products) ಗಳಿಗೂ ಅವನನ್ನ ರಾಯಭಾರಿ ಆಗು (ambassador) ಅಂತ ರಾಶಿ ದುಡ್ಡು ಕೊಡಲ್ಲ.
ಛೇ ಆ ಯೊಧನಿಗೂ ಗೆದ್ದ ಹೀರೊ ಅಂತ ಕೂಲ್ ಡ್ರಿಂಕ್ಸ್ ಕಂಪೆನಿಗೆ ambassador ಆಗೊ ಅಸೆ ಇಲ್ಲ.
ಓಮ್ಮೆ ಗೆದ್ದು ಅಟ್ಟಕ್ಕೇರಿ , ರಾಜ್ಯಭಾರ ನೆಡೆಸಲಿಕ್ಕೆ ಆತ ಪರ್ಲಿಮೆಂಟಲ್ಲಿ M.P ನೆ?
Great Indian real hero , The soldier so ,ಅವನನ್ನ ಹೊಸ film ಗೆ ಹೀರೊ ಮಾಡೊಕ್ಕಾಗತ್ಯೆ.

ಪ್ರಿಯ ಭಾರತೀಯ
ಒಮ್ಮೆ ನಮ್ಮೆಲ್ಲರ ಮನದಲ್ಲಿ ಅವನ ಸ್ಮ್ರುತಿ ಇರಲಿ.
ಪ್ರತಿಯಾಗಿ ಏನೂ ಕೇಳದೆ ಅವನು ಗೆದಿದ್ದು ನಿನಗಾಗಿ ,ಪ್ರತಿಯೊಬ್ಬರಿಗಾಗಿ
ಕೆಲವು ಕ್ಷಣ ನಮ್ಮ ಹೃದಯ ಪ್ರಾಮಾಣಿಕವಾಗಿ ಅವನಿಗಾಗಿ ಮಿಡಿದರೆ ,ಇಗೋ ನಿನ್ನ ಕಣ್ಣಲ್ಲಿ ತೊಟ್ಟಿಕ್ಕಿದ ಬೆಚ್ಚನೆ ನೀರು , ಕೃತಜ್ನ್ಯತೆಯ ಬೆಚ್ಚನೆ ನಿಟ್ಟುಸಿರು ಖಂಡಿತ ಹಿಮಾಲಯದ ಕೊರೆವ ಚಳಿಯಲ್ಲೂ ಅವನನ್ನ ಬೆಚ್ಚಗೆ ಇರಿಸುತ್ತದೆ.

1 comment:

Anonymous said...

seriously.....tumba chennagide kano...navelru allig hogi avra tara deshaseve madakke agalla....adre avra tyagakke atleat ee tara gourava torisidre khanditha avrige shanthi sigathe...pratiyobba baratiyanallu obba deshapreme idanentha....
ninna ee shraddanjali manamuttuvanthide....!!! ....really a very nice fentastic writing..!!!